ಸಂಗೀತ ಪ್ರಣತಿ #71- ತಾಯಿಗೆ
ಒಂದು ಸುಂದರ ಹೂವನರಳಿಸಿದ ಲತೆಯಂತೆ
ರಚನೆ
ಜಿ.ಎಸ್. ಶಿವರುದ್ರಪ್ಪ
ಗಾಯನ
ಮಾಲಿನಿ ಕೇಶವ ಪ್ರಸಾದ್
ಸಂಗೀತ
ಚಿದಂಬರ ಕಾಳಮಂಜಿ
**********
ಒಬ್ಬ ತಾಯಿ ಮಗುವನ್ನು ಮಮತೆಯಿಂದ ಮುದ್ದು ಮಾಡುವ ಅನನ್ಯ ಸಂಭ್ರಮದ ವರ್ಣನೆ ಇದು
***********
ಒಂದು ಸುಂದರ ಹೂವನರಳಿಸಿದ ಲತೆಯಂತೆ
ನೀನಿರುವೆ ನಸುನಗುವ ಕಂದನೊಡನೆ
ಒಂದೆ ಬೆಳ್ಮುಗಿಲನ್ನು ಮಡಿಲಲ್ಲಿ ಹಿಡಿದಿರುವ
ಗಿರಿಕನ್ಯೆಯಂದದಲಿ ತೋರುತಿರುವೆ
'ನನ್ನ ಚಿನ್ನ ಬಂಗಾರಿ ಅಪರಂಜಿ ಕಟ್ಟಾಣಿ'
ಎಂದು ಮಗುವನ್ನು ಕರೆದುದೆನಿತು ಸಲವೋ!
ಎದೆಯ ಸಿರಿಯನ್ನೆಲ್ಲ ಸವಿಮುತ್ತಿನಲಿ ತುಂಬಿ
ಎರೆದನಿತು ತಣಿವಿಲ್ಲ; ಏನು ಒಲವೋ !
ತನ್ನಿಷ್ಟ ದೇವತೆಗೆ ಪೂಜೆಗೈಯುತ ದಿನವು
ತನ್ನ ತಾನೇ ಮರೆವ ಭಕ್ತನಂತೆ
ಅದರ ಸಿಂಗಾರದಲಿ ನಿನ್ನ ನೀನೇ ಮರೆತೆ
ಬೊಂಬೆಯಾಟದೊಳಿರುವ ಹಸುಳೆಯಂತೆ !
ನಿನ್ನ ಕಣ್ಣೊಳು ಹೊಳೆವ ವಾತ್ಸಲ್ಯಚಂದ್ರಿಕೆಯೊಳದ್ದಿ
ಶಿಶು ನಗುತಲಿದೆ ಚಿಕ್ಕೆಯಂತೆ
ಜಗವನಾಳುವ ಒಲವು ಮೈದೋರಿದೀ ಪರಿಗೆ
ಬೆರಗು ಮೌನದೊಳಿರುವೆ ಬಾನಿನಂತೆ
*******************
ಚಿದಂಬರ ಕಾಳಮಂಜಿ ಸಾರಥ್ಯದ “ನಮ್ಮನೆ ಸಂಗೀತ ಪ್ರಣತಿ” ಬಳಗದ
70 ಕ್ಕೂ ಹೆಚ್ಚು ವೈವಿಧ್ಯಮಯ ಭಾವಗೀತೆಗಳನ್ನು ಕೇಳಲು ಈ ವಾಹಿನಿಗೆ ಭೇಟಿಕೊಡಿ
Subscribe , Share and Comment
www.youtube.com/chidvijay
www.facebook.com/chidvijay